ಆಂಬ್ರೊಚಿನಿ, ಎಂಜೆಲೊ
	(1454-94) ಇಟಲಿಯ ಕವಿ. ಮಾನವವಾದಿ. ಭಾಷಾಶಾಸ್ತ್ರಜ್ಞ. ಈತನಿಗೆ ಪಾಲಿಟಿಯಾನೊ ಎಂಬ ಇನ್ನೊಂದು ಹೆಸರಿದೆ. ಇವನ ಆರ್ಫಿಯ ಉತ್ತಮ ಕಾವ್ಯ. ಫ್ಲಾರೆನ್ಸಿನಲ್ಲಿ ತತ್ತ್ವಶಾಸ್ತ್ರ ಮತ್ತು ಸಾಹಿತ್ಯಗಳ ಮೇಲೆ ಈತ ಕೊಟ್ಟ ಉಪನ್ಯಾಸಗಳು ಪ್ರಸಿದ್ಧವಾಗಿವೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಉತ್ಕøಷ್ಟ ಶೋಕಗೀತೆ, ಪ್ರಗಾಥ, ನಾಟುನುಡಿಗಳನ್ನೂ ಮಾತೃಭಾಷೆಯಲ್ಲಿ ಸುಂದರ ಪ್ರೇಮಗೀತೆಗಳನ್ನೂ ಈತ ರಚಿಸಿದ.								
	(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ